ಹಬ್ಬಕ್ಕೆ ಮಾಡಿ ಬಾಳೆಹಣ್ಣಿನ ಹಲ್ವಾ

ಹಬ್ಬಕ್ಕೆ ಮಾಡಿ ಬಾಳೆಹಣ್ಣಿನ ಹಲ್ವಾ

LK   ¦    Nov 05, 2018 12:31:59 PM (IST)
ಹಬ್ಬಕ್ಕೆ ಮಾಡಿ ಬಾಳೆಹಣ್ಣಿನ ಹಲ್ವಾ

ಬಾಳೆಹಣ್ಣನ್ನು ಹಾಗೆಯೇ ಸೇವಿಸುವುದು ಮಾತ್ರವಲ್ಲದೆ ಅದರಿಂದಲೂ ಹಲವಾರು ರೀತಿಯ ತಿಂಡಿಗಳನ್ನು ಮಾಡಬಹುದು. ಅದರಲ್ಲಿ ಬಾಳೆಹಣ್ಣು ಹಲ್ವಾ ಕೂಡ ಒಂದಾಗಿದೆ. ಈ ಬಾಳೆಹಣ್ಣು ಹಲ್ವಾ ಮಾಡುವುದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಬಾಳೆಹಣ್ಣಿನ ಹಲ್ವಾ ಮಾಡಲು ಬೇಕಾಗುವ ಪದಾರ್ಥಗಳು ಹೀಗಿದೆ.

ಬಾಳೆಹಣ್ಣು- ಐದು

ರವೆ- ಒಂದು ಕಪ್

ಹಾಲು- ಎರಡು ಕಪ್

ಸಕ್ಕರೆ-ಎರಡು ಕಪ್

ಉಪ್ಪು- ರುಚಿಗೆ ತಕ್ಕಂತೆ

ಕ್ರೀಮ್- ಅರ್ಧ ಕಪ್

ಗೋಡಂಬಿ- ಸ್ವಲ್ಪ

ಏಲಕ್ಕಿ ಪುಡಿ- ಸ್ವಲ್ಪ

ದ್ರಾಕ್ಷಿ- ಸ್ವಲ್ಪ

ಬಾದಾಮಿ- ಸ್ವಲ್ಪ

ತುಪ್ಪ- ಅರ್ಧ ಕಪ್

ಬಾಳೆ ಹಣ್ಣು ಹಲ್ವಾ ಮಾಡುವ ವಿಧಾನ ಹೀಗಿದೆ:

ಮೊದಲಿಗೆ ಮಾಗಿದ ಬಾಳೆಹಣ್ಣನ್ನು ತೆಗೆದುಕೊಂಡು ಸಿಪ್ಪೆ ತೆಗೆದಿಟ್ಟುಕೊಳ್ಳಬೇಕು. ಬಳಿಕ ತುಪ್ಪದಲ್ಲಿ ರವೆಯನ್ನು ಘಮ್ಮೆಂದು ಕಂದು ಬಣ್ಣಕ್ಕೆ ತಿರುಗುವ ತನಕ ಹುರಿದು ಅದನ್ನು ತೆಗೆದು ಬಾಳೆಹಣ್ಣಿನೊಂದಿಗೆ ಹಾಕಿ ಚೆನ್ನಾಗಿ ಕಲೆಸಬೇಕು. ಅದಕ್ಕೆ ತುಪ್ಪದಲ್ಲಿ ಹುರಿದ ಬಾದಾಮಿ, ಒಣದ್ರಾಕ್ಷಿ, ಗೋಡಂಬಿಯನ್ನು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಎಲ್ಲವನ್ನು ಸೇರಿಸಿ ಮಿಕ್ಸ್ ಮಾಡಿ. ಆ ನಂತರ ಪಾತ್ರೆಯಲ್ಲಿ ಹಾಕಿ ಸಣ್ಣಗಿನ ಉರಿಯಲ್ಲಿ ಕಾಯಿಸಿ ಈ ವೇಳೆ ಹಾಲನ್ನು ಹಾಕಿ ತಿರುಗಿಸಿ. ಬಿಸಿಯಾಗುತ್ತಿದ್ದಂತೆಯೇ ಹಾಲು ಇಂಗುತ್ತದೆ. ಆಗ ಕ್ರೀಮ್ ಮತ್ತು ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅದರ ಮೇಲೆ ಏಲಕ್ಕಿ ಪುಡಿಯನ್ನು ಉದುರಿಸಿ. ನಂತರ ತೆಗೆದು ಅಗಲವಾದ ಪಾತ್ರೆಯಲ್ಲಿ ಹಾಕಿ ಒಂದೇ ಸಮನಾಗಿ ತಟ್ಟಿ. ನಂತರ ಅದನ್ನು ತಮಗೆ ಹೇಗೆ ಬೇಕೋ ಆ ರೀತಿ ಕಟ್ ಮಾಡಿ ಬಡಿಸಿ.