ಖರ್ಜೂರ ಕಾಫಿ ಮಿಲ್ಕ್ ಶೇಕ್

ಖರ್ಜೂರ ಕಾಫಿ ಮಿಲ್ಕ್ ಶೇಕ್

Dec 12, 2016 07:36:41 AM (IST)

ಹಾಲಿನೊಂದಿಗೆ ಕ್ರೀಮ್ ಅನ್ನು ಬೆರೆಸಿ ಮಾಡುವ ಶೇಕ್ಗಳು ಇತರ ಜ್ಯೂಸ್ಗಳಿಗಿಂತಲೂ ಆಹ್ಲಾದಮಯವಾಗಿರುತ್ತದೆ ಮತ್ತು ದುಪ್ಪಟ್ಟು ರುಚಿಯನ್ನು ಹೊಂದಿರುತ್ತದೆ. ಬರಿಯ ಹಣ್ಣುಗಳಿಂದ ಮಾತ್ರವಲ್ಲದೆ ಕಾಫಿಯಿಂದ ಕೂಡ ಮಿಲ್ಕ್ ಶೇಕ್ ತಯಾರಿಸಬಹುದು. ಬನ್ನಿ ನಾವು ಇವತ್ತು ಖರ್ಜೂರ ಕಾಫಿ ಮಿಲ್ಕ್ ಶೇಕ್ ತಯಾರಿಸಿ ಕುಡಿಯೋಣ.

ಬೇಕಾಗುವ ಸಾಮಾಗ್ರಿಗಳು
*1 ಬೀಜವಿಲ್ಲದ ಖರ್ಜೂರ - 1 ಕಪ್
*2 ತ್ವರಿತ ಕಾಫಿ ಪೌಡರ್ - 10 ಚಮಚ
*3 ಹಾಲು - 6 ಕಪ್ಸ್
*4 ಹಸಿರು ಏಲಕ್ಕಿ - 5-6
*5 ಸಕ್ಕರೆ - 3 ಚಮಚ
*6 ತಾಜಾ ಕ್ರೀಂ - 3/4 ಕಪ್
*7 ಐಸ್ ಕ್ಯೂಬ್ಸ್ ಬೇಕಾದಷ್ಟು

ತಯಾರಿಸುವ ವಿಧಾನ: ಖರ್ಜೂರದ ಬೀಜವನ್ನು ತೆಗೆದು ಪಕ್ಕದಲ್ಲಿರಿಸಿಕೊಳ್ಳಿ. ಈಗ ಕಾಫಿ ಡಿಕಾಕ್ಶನ್ ಅನ್ನು ಸಿದ್ಧಮಾಡಿ. ಇದಕ್ಕಾಗಿ ಸ್ಟವ್ ಆನ್ ಮಾಡಿ ಪ್ಯಾನ್ ಬಿಸಿ ಮಾಡಿಕೊಳ್ಳಿ. ನೀರು ಮತ್ತು ಕಾಫಿ ಹುಡಿಯನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಸಕ್ಕರೆ ಮತ್ತು ಹಸಿರು ಏಲಕ್ಕಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ಕಾಯಿರಿ. ಸ್ಟವ್ ಆಫ್ ಮಾಡಿ ಮತ್ತು ಕೊಠಡಿಯ ತಾಪಮಾನಕ್ಕೆ ಅದನ್ನು ತಂದುಕೊಳ್ಳಿ. ಈಗ, ಬೀಜ ರಹಿತ ಖರ್ಜೂರವನ್ನು ಸೇರಿಸಿ, ಬ್ಲೆಂಡರ್‌ಗೆ ಸ್ವಲ್ಪ ಹಾಲನ್ನು ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ. ಐಸ್ ಕ್ಯೂಬ್ಸ್, ಕಾಫಿ ಡಿಕಾಕ್ಷನ್, ಇನ್ನಷ್ಟು ಹಾಲು ಮತ್ತು ಸಾಕಷ್ಟು ತಾಜಾ ಕ್ರೀಂ ಅನ್ನು ಸೇರಿಸಿಕೊಳ್ಳಿ. ಎಲ್ಲವನ್ನೂ ಚೆನ್ನಾಗಿ ಬ್ಲೆಂಡ್ ಮಾಡಿಕೊಳ್ಳಿ. ಉದ್ದನೆಯ ಗ್ಲಾಸ್‌ಗೆ ಮಿಲ್ಕ್ ಶೇಕ್ ಅನ್ನು ಹಾಕಿ ಮತ್ತು ಕಾಫಿ ಡಿಕಾಕ್ಷನ್‌ನಿಂದ ಅಲಂಕರಿಸಿ. ಖರ್ಜೂರ ಮತ್ತು ಕಾಫಿ ಬೆರೆತ ಮಿಲ್ಕ್ ಶೇಕ್ ಸರ್ವ್ ಮಾಡಲು ಸಿದ್ಧವಾಗಿದೆ.