ರುಚಿರುಚಿಯಾದ ಗೆಣಸಿನ ಅನ್ನ ಮಾಡಿನೋಡಿ

ರುಚಿರುಚಿಯಾದ ಗೆಣಸಿನ ಅನ್ನ ಮಾಡಿನೋಡಿ

Oct 09, 2017 02:36:19 PM (IST)

ಗೆಣಸಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ ಎನ್ನುವುದು ಹಲವಾರು ಅಧ್ಯಯನಗಳು ಹೇಳಿವೆ. ವಿಶ್ವದಲ್ಲಿ ಅತೀ ವೇಗದ ವ್ಯಕ್ತಿಯಾಗಿರುವ ಉಸೇನ್ ಬೋಲ್ಟ್ ತನ್ನ ಆಹಾರಕ್ರಮದಲ್ಲಿ ಗೆಣಸನ್ನು ದಿನನಿತ್ಯ ಸೇವಿಸುತ್ತಾರೆ ಎಂದರೆ ಅಚ್ಚರಿಯಾಗಬಹುದು. ಆದರೆ ಸ್ವಲ್ಪ ವಾಯು ಪ್ರಕೋಪ ಹೊಂದಿರುವ ಗೆಣಸು ಆರೋಗ್ಯಕ್ಕೆ ಒಳ್ಳೆಯದು. ಗೆಣಸಿನಿಂದ ಮಾಡುವ ಸ್ವೀಟ್ ಪೊಟಾಟೊ ರೈಸ್ ತಯಾರಿಸುವ ವಿಧಾನ ನಿಮಗೆ ಹೇಳಿಕೊಡಲಿದ್ದೇವೆ.

ಒಬ್ಬರಿಗೆ ಬಡಿಸಬಹುದಾದಷ್ಟು
ತಯಾರಿಸುವ ಸಮಯ: 20 ನಿಮಿಷ
ಅಡುಗೆ ಸಮಯ: 20 ನಿಮಿಷ

ಬೇಕಾಗುವ ಸಾಮಗ್ರಿಗಳು
ಮೂರು ಕಪ್ ಅಕ್ಕಿ(ಬೇಯಿಸಿರುವುದು)
10 ಬೆಳ್ಳುಳ್ಳಿ ಎಸಲುಗಳನ್ನು ಸರಿಯಾಗಿ ಕತ್ತರಿಸಿಕೊಳ್ಳಿ
1/2 ಕಪ್ ಎಸಲು ಈರುಳ್ಳಿ(ಸ್ಪ್ರಿಂಗ್ ಓನಿಯನ್)
1 ಚಮಚ ಶುಂಠಿ ರಸ
1/2 ಮೆಣಸಿನ ಹುಡಿ
2 ಗೆಣಸು
3 ಚಮಚ ಆಲಿವ್ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ
* ಎಣ್ಣೆಯನ್ನು ತವಾದಲ್ಲಿ ಬಿಸಿ ಮಾಡಿ.
* ಇದಕ್ಕೆ ಬೆಳ್ಳುಳ್ಳಿ ಹಾಕಿ ಕಂದು ಬಣ್ಣಕ್ಕೆ ತಿರುಗುವ ತನಕ ಹುರಿಯಿರಿ.
* ಗೆಣಸು ಮತ್ತು ಉಪ್ಪು ಹಾಕಿ ಅರ್ಧ ಬೇಯುವ ತನಕ ಹುರಿಯಿರಿ.
* ಮೆಣಸಿನ ಹುಡಿ ಮತ್ತು ಶುಂಠಿ ರಸ ಹಾಕಿ ಪೂರ್ತಿ ಬೇಯಿಸಿ.
* ಸ್ಪ್ರಿಂಗ್ ಓನಿಯನ್ ಹಾಕಿ ಸರಿಯಾಗಿ ಮಿಶ್ರಣ ಮಾಡಿ.
* ಬೇಯಿಸಿದ ಅನ್ನ ಹಾಕಿ ಮಿಶ್ರಣ ಮಾಡಿ.
* ಗ್ಯಾಸ್ ಹಾರಿಸಿ ಬಿಸಿಬಿಸಿಯಾಗಿರುವಂತೆ ಬಡಿಸಿ.

ಈ ಖಾದ್ಯಕ್ಕೆ ಟೊಮೆಟೋ ಮತ್ತು ಈರುಳ್ಳಿ ಹಾಕಿದರೆ ರುಚಿ ಮತ್ತಷ್ಟು ಹೆಚ್ಚಾಗುವುದು.