ಕಿಚಡಿ ಮಾಡೋದು ಬಲು ಸುಲಭ

ಕಿಚಡಿ ಮಾಡೋದು ಬಲು ಸುಲಭ

LK   ¦    Jul 09, 2018 01:50:25 PM (IST)
ಕಿಚಡಿ ಮಾಡೋದು ಬಲು ಸುಲಭ

ಕಿಚಡಿ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಕೆಲವರಿಗೆ ಇದನ್ನು ಮಾಡುವುದು ಹೇಗೆ ಎಂಬ ಚಿಂತೆಯೂ ಕಾಡುತ್ತಿರುತ್ತದೆ. ಹೀಗಾಗಿ ಕಿಚಡಿ ಮಾಡುವುದು ಹೇಗೆ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಕಿಚಡಿ ಮಾಡಲು ಬೇಕಾಗುವ ಪದಾರ್ಥಗಳು ಹೀಗಿವೆ.

ಅಕ್ಕಿ- 1 ಪಾವು

ಕಾಯಿ ತುರಿ- 1 ಬಟ್ಟಲು

ಒಣಮೆಣಸು- 8

ಜೀರಿಗೆ- ಸ್ವಲ್ಪ

ಈರುಳ್ಳಿ-2

ಬೆಳ್ಳುಳ್ಳಿ- 5 ಎಸಳು

ದನಿಯಾ- ಸ್ವಲ್ಪ

ಬೇಳೆ- ಅರ್ಧ ಪಾವು

ಹೆಸರುಬೇಳೆ- ಅರ್ಧಪಾವು

ಚಿಲ್ಕವರೆ ಬೇಳೆ– ಅರ್ಧಪಾವು

ಸಾಸಿವೆ- ಸ್ವಲ್ಪ

ಕರಿಬೇವು

ಕಿಚಡಿ ಮಾಡುವ ವಿಧಾನ ಹೀಗಿದೆ

ಮೊದಲಿಗೆ ಕಾಯಿ, ಒಣಮೆಣಸು, ಜೀರಿಗೆ, ಈರುಳ್ಳಿ, ಬೆಳ್ಳುಳ್ಳಿ, ದನಿಯಾವನ್ನು ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಹುರಿದು ಬಳಿಕ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಟ್ಟುಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಸಾಸಿವೆ ಸಿಡಿಸಿ ಅದಕ್ಕೆ ಕರಿಬೇವು ಮತ್ತು ಹಚ್ಚಿದ ಸ್ವಲ್ಪ ಈರುಳ್ಳಿಯನ್ನು ಬೇಯಿಸಿ ಅದನ್ನು ಕುಕ್ಕರ್‍ ಗೆ ಹಾಕಬೇಕು. ಬಳಿಕ ರುಬ್ಬಿಟ್ಟ ಮಸಾಲೆ ಪದಾರ್ಥವನ್ನು ಅದಕ್ಕೆ ಹಾಕಿ, ಆ ನಂತರ ಅಕ್ಕಿ, ಹೆಸರು ಬೇಳೆ, ಬೇಳೆ, ಚಿಲ್ಕವರೆಬೇಳೆ ರುಚಿಗೆ ತಕ್ಕಂತೆ ಸ್ವಲ್ಪ ಉಪ್ಪು ಹಾಕಿ ಸುಮಾರು 2 ರಿಂದ 3 ವಿಶಲ್ ಬರೋ ತನಕ ಬೇಯಿಸಿ ಬಳಿಕ ತೆಗೆದು ಚೆನ್ನಾಗಿ ಮಿಕ್ಸ್ ಮಾಡಿದರೆ ಕಿಚಡಿ ರೆಡಿಯಾಗಲಿದೆ.