ನುಗ್ಗೆಕಾಯಿ-ತೆಂಗಿನಕಾಯಿ ಹಾಲಿನ ಸ್ಟಿವ್ ರುಚಿಯೋ ರುಚಿ...

ನುಗ್ಗೆಕಾಯಿ-ತೆಂಗಿನಕಾಯಿ ಹಾಲಿನ ಸ್ಟಿವ್ ರುಚಿಯೋ ರುಚಿ...

HSA   ¦    Mar 05, 2018 02:43:35 PM (IST)
ನುಗ್ಗೆಕಾಯಿ-ತೆಂಗಿನಕಾಯಿ ಹಾಲಿನ ಸ್ಟಿವ್ ರುಚಿಯೋ ರುಚಿ...

ಆಯಾಯ ಕಾಲದಲ್ಲಿ ಸಿಗುವಂತಹ ಹಣ್ಣು, ತರಕಾರಿಗಳ ಸೇವನೆ ಮಾಡಿದರೆ ಅದರಿಂದ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ಮಾತಿದೆ. ಪ್ರಕೃತಿ ಕೂಡ ಬದಲಾಗುತ್ತಿರುವ ಹವಾಮಾನಕ್ಕೆ ಅನುಗುಣವಾಗಿ ನಮಗೆ ಬೇಕಿರುವಂತಹ ಹಣ್ಣುಗಳು ಹಾಗೂ ತರಕಾರಿಗಳನ್ನು ನೀಡುತ್ತದೆ. ಇಂತಹದರಲ್ಲಿ ಹಲವಾರು ಪೋಷಕಾಂಶಗಳನ್ನು ಒಳಗೊಂಡಿರುವ ನುಗ್ಗೆಕಾಯಿ ಕೂಡ ಒಂದು. ನುಗ್ಗೆ ಕಾಯಿಯಿಂದ ಮಾಡುವ ಸ್ಟೀವ್ ಹೇಗಿರುತ್ತದೆ ಮತ್ತು ತಯಾರಿ ಹೇಗೆ ಎಂದು ತಿಳಿಯಿರಿ.

ತಯಾರಿಸುವ ಸಮಯ: ಹತ್ತು ನಿಮಿಷ
ಅಡುಗೆ ಸಮಯ: 25ರಿಂದ 30 ನಿಮಿಷ
ನಾಲ್ಕು ಮಂದಿಗೆ ಆಗುವಷ್ಟು

ಬೇಕಾಗುವ ಸಾಮಗ್ರಿಗಳು
ಎಣ್ಣೆ-1 ಚಮಚ
ಶುಂಠಿ-ಒಂದು ಚಮಚ ಸಣ್ಣದಾಗಿ ಕತ್ತರಿಸಿರುವುದು
ಬೆಳ್ಳುಳ್ಳಿ-ನಾಲ್ಕು ಎಸಲು ಸಣ್ಣಗೆ ಕತ್ತರಿಸಿರುವುದು
ಈರುಳ್ಳಿ-1 ಮಧ್ಯಮ ಗಾತ್ರದ್ದು, ಉದ್ದಗೆ ಕತ್ತರಿಸಿರುವುದು.
ಹಸಿ ಮೆಣಸು-3-4 ಸಣ್ಣಗೆ ಕತ್ತರಿಸಿರುವುದು
ನುಗ್ಗೆ ಕಾಯಿ-1 ಕತ್ತರಿಸಿಕೊಂಡು
ದಪ್ಪಗಿನ ತೆಂಗಿನಹಾಲು-1 ಕಪ್
ಅಕ್ಕಿ ಹಿಟ್ಟು-1 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ನೀರು ಅಗತ್ಯಕ್ಕೆ ತಕ್ಕಷ್ಟು

ತಯಾರಿಸುವ ವಿಧಾನ
ತೆಂಗಿನ ಹಾಲಿಗೆ ಅಕ್ಕಿಹಿಟ್ಟು ಹಾಕಿ ಮಿಶ್ರಣ ಮಾಡಿ ಬದಿಗಿಡಿ
ನುಗ್ಗೆಕಾಯಿ, ನೀರು ಮತ್ತು ಉಪ್ಪು ಹಾಕಿ ಬೇಯಿಸಿ. ನುಗ್ಗೆ ಕಾಯಿ ಬೆಂದ ಬಳಿಕ ತೆಗೆದು ಬದಿಗಿಡಿ.
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಶುಂಠಿ, ಬೆಳ್ಳುಳ್ಳಿ ಹಾಕಿ ಒಂದು ನಿಮಿಷ ತಿರುಗಿಸಿ.
ಈರುಳ್ಳಿ, ಹಸಿಮೆಣಸು ಹಾಕಿ ಮತ್ತು ತಿರುಗಿಸಿ, ಸ್ವಲ್ಪ ಉಪ್ಪು ಹಾಕಿ .ಈರುಳ್ಳಿ ಕಂದು ಬಣ್ಣಕ್ಕೆ ತಿರುಗಲಿ.
ನೀರಿನೊಂದಿಗೆ ನುಗ್ಗೆಕಾಯಿ ಹಾಕಿ ಮತ್ತು ಮಿಶ್ರಣ ಮಾಡಿ.
ತೆಂಗಿನಕಾಯಿ ಹಾಲಿನ ಮಿಶ್ರಣ ಹಾಕಿ ಮತ್ತು ಮಿಶ್ರಣ ಮಾಡಿ.
ಸರಿಯಾಗಿ ಕುದಿದ ಬಳಿಕ ಬೆಂಕಿ ಹಾರಿಸಿ.
ಬಿಸಿ ಇರುವಾಗಲೇ ಬೆಳ್ತಿಗೆ ಅನ್ನ ಅಥವಾ ಅಪ್ಪಂ ಜತೆ ಬಡಿಸಿ.