ಆಲೂ ಪಾಲ್ದಾ ಮಾಡುವುದನ್ನು ಕಲಿತುಕೊಳ್ಳಿ

ಆಲೂ ಪಾಲ್ದಾ ಮಾಡುವುದನ್ನು ಕಲಿತುಕೊಳ್ಳಿ

Nov 19, 2017 02:54:52 PM (IST)
ಆಲೂ ಪಾಲ್ದಾ ಮಾಡುವುದನ್ನು ಕಲಿತುಕೊಳ್ಳಿ

ಉತ್ತರ ಭಾರತೀಯರು ಆಲೂಗಡ್ಡೆ ಬಳಸುವಷ್ಟು ಬೇರೆ ಯಾರು ಬಳಸುವುದಿಲ್ಲವೆಂದರೆ ಅದು ತಪ್ಪಾಗಲಾರದು. ಯಾಕೆಂದರೆ ಅವರು ತಯಾರಿಸುವಂತಹ ಪ್ರತಿಯೊಂದು ಖಾದ್ಯಕ್ಕೂ ಆಲೂಗಡ್ಡೆ ಹಾಕಿಯೇ ಹಾಕುತ್ತಾರೆ. ಉತ್ತರ ಭಾರತೀಯ ಶೈಲಿಯ ಅಲೂ ಪಾಲ್ದಾ ಮಾಡುವುದು ಹೇಗೆ ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ.

ಎಷ್ಟು ಮಂದಿಗೆ: 6
ಅಡುಗೆ ಸಮಯ: 30 ನಿಮಿಷ
ತಯಾರಿ ಸಮಯ: 10 ನಿಮಿಷ

ಅಲೂ ಪಾಲ್ದಾಗೆ ಬೇಕಾಗುವ ಸಾಮಗ್ರಿಗಳು
3 ಬಟಾಟೆಯ ಸಿಪ್ಪೆ ತೆಗೆದು ಅದನ್ನು ಉದ್ದ ಫಿಂಗರ್ ಫ್ರೈಯಂತೆ ಕತ್ತರಿಸಿ.
1 ಈರುಳ್ಳಿ ಕತ್ತರಿಸಿರುವುದು.
1 ಕಪ್ಪು ಏಲಕ್ಕಿ
1 ದಾಲ್ಚಿನಿ ಚಕ್ಕೆ
5-6 ಲವಂಗ
1 ಚಮಚ ಜೀರಿಗೆ
ಚಿಟಿಕೆ ಹಿಂಗು
2 ಚಮಚ ಕಚ್ಚಾ ಅಕ್ಕಿ ಮತ್ತು ಮೂರು ಹಸಿರು ಏಲಕ್ಕಿ(ನಾಲ್ಕು ಚಮಚ ನೀರು ಹಾಕಿ ರುಬ್ಬಿಕೊಳ್ಳಿ)
6 ಕಪ್ ಮೊಸರು
2 ಚಮಚದಷ್ಟು ಬೆಣ್ಣೆ
2 ಚಮಚ ಕೊತ್ತಂಬರಿ ಹುಡಿ, 3/4 ಚಮಚ ಅರಶಿನ, 1 ಚಮಚ ಗರಂ ಮಸಾಲ

ತಯಾರಿಸುವ ವಿಧಾನ
2 ಚಮಚದಷ್ಟು ಬೆಣ್ಣೆಯನ್ನು ಬಿಸಿ ಮಾಡಿ.
ಇದಕ್ಕೆ ಒಂದು ಕಪ್ಪು ಏಲಕ್ಕಿ, ಒಂದು ದಾಲ್ಚಿನಿ ಚಕ್ಕೆ, 5-6 ಲವಂಗ, ಒಂದು ಚಿಟಿಕೆ ಹಿಂಗು ಮತ್ತು ಒಂದು ಚಮಚ ಜೀರಿಗೆ ಹಾಕಿ.
ಕತ್ತರಿಸಿಕೊಂಡಿರುವ ಈರುಳ್ಳಿ ಹಾಕಿ.
2 ಚಮಚ ಕೊತ್ತಂಬರಿ ಹುಡಿ, 3/4 ಚಮಚ ಅರಶಿನ, 1 ಚಮಚ ಗರಂ ಮಸಾಲ ಮತ್ತು ಉಪ್ಪು ಹಾಕಿ.
ಬಟಾಟೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ.
ಒಂದು ಮುಚ್ಚಲ ಮುಚ್ಚಿ ಬಟಾಟೆ ಬೇಯುವ ತನಕ ಸುಮಾರು 15 ನಿಮಿಷ ಹದ ಬೆಂಕಿಯಲ್ಲಿ ಬೇಯಿಸಿ.
ರುಬ್ಬಿರುವ ಅಕ್ಕಿ ಮತ್ತು ಮೊಸರು ಹಾಕಿಕೊಳ್ಳಿ.
ಮೊಸರು ಹಾಕಿಕೊಂಡ ಬಳಿಕ ಮಧ್ಯಮ ಬೆಂಕಿಯಲ್ಲಿ ಮಸಾಲೆಯು ಕುದಿಯಲಿ.
ಐದು ನಿಮಿಷ ಕಾಲ ಬೇಯಲಿ.
ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಬಡಿಸಿ.