ಮಿಕ್ಸ್ ತರಕಾರಿ ಹುಳಿ ಮಾಡಿ ಸವಿಯಿರಿ!

ಮಿಕ್ಸ್ ತರಕಾರಿ ಹುಳಿ ಮಾಡಿ ಸವಿಯಿರಿ!

LK   ¦    Sep 29, 2018 12:21:51 PM (IST)
ಮಿಕ್ಸ್ ತರಕಾರಿ ಹುಳಿ ಮಾಡಿ ಸವಿಯಿರಿ!

ಒಂದಷ್ಟು ತರಕಾರಿಗಳನ್ನು ಬಳಸಿಕೊಂಡು ಮಾಡುವ ಹುಳಿ ರುಚಿಯಾಗಿದ್ದು ಊಟಕ್ಕೆ ಸಾಥ್ ನೀಡುತ್ತದೆ. ಹಲವು ತರಕಾರಿಗಳಿಂದ ಹುಳಿಯನ್ನು ಮಾಡಬಹುದಾದರೂ ಕೆಲವು ತರಕಾರಿಗಳನ್ನು ಸೇರಿಸಿಕೊಂಡು ಮಾಡುವ ಹುಳಿ ಬಾಯಿ ಚಪ್ಪರಿಸುವಂತೆ ಮಾಡುತ್ತದೆ.

ಇಷ್ಟಕ್ಕೂ ಮಿಕ್ಸ್ ತರಕಾರಿಯ ಹುಳಿ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಮಿಕ್ಸ್ ತರಕಾರಿ ಹುಳಿಗೆ ಬೇಕಾಗುವ ತರಕಾರಿ ಮತ್ತು ಮಸಾಲೆ ಪದಾರ್ಥಗಳು ಹೀಗಿವೆ. ಮಾಡುವ ಪ್ರಮಾಣದ ಮೇಲೆ ಅಂದಾಜಿನಲ್ಲಿ ತರಕಾರಿಗಳನ್ನು ಬಳಸಿಕೊಳ್ಳಬೇಕು.

ಬೀನ್ಸ್

ಸೌತೆಕಾಯಿ

ಆಲೂಗೆಡ್ಡೆ

ಮೂಲಂಗಿ

ಕೊತ್ತಂಬರಿ ಸೊಪ್ಪು

ಬೇಳೆ- ಸ್ವಲ್ಪ

ಅಕ್ಕಿ- 2 ಚಮಚ

ಒಣಮೆಣಸಿನ ಕಾಯಿ- ಖಾರಕ್ಕೆ ತಕ್ಕಂತೆ

ದನಿಯಾ- ಸ್ವಲ್ಪ

ಜೀರಿಗೆ- ಸ್ವಲ್ಪ

ಕಾಯಿತುರಿ- ಒಂದು ಬಟ್ಟಲು

ಮಾಡುವ ವಿಧಾನ ಹೀಗಿದೆ: ಮೊದಲಿಗೆ ತರಕಾರಿಗಳಾದ ಬೀನ್ಸ್, ಸೌತೆಕಾಯಿ, ಆಲೂಗೆಡ್ಡೆ, ಮೂಲಂಗಿಯನ್ನು ಹಚ್ಚಿ ಬೇಳೆಯೊಂದಿಗೆ ಬೇಯಿಸಿಟ್ಟುಕೊಳ್ಳಬೇಕು. ಇನ್ನೊಂದೆಡೆ ಧನಿಯಾ, ಅಕ್ಕಿ, ಜೀರಿಗೆ, ಮೆಣಸಿನಕಾಯಿ ಮೊದಲಾದವುಗಳನ್ನು ಮೊದಲು ನೀರಿನಲ್ಲಿ ನೆನೆಸಿಟ್ಟುಕೊಂಡು ಬಳಿಕ ತೆಗೆದು ಕಾಯಿ ತುರಿಯನ್ನು ಸೇರಿಸಿಕೊಂಡು ಚೆನ್ನಾಗಿ ರುಬ್ಬಬೇಕು. ಬಳಿಕ ಹುಣಸೆಹಣ್ಣನ್ನು ಕಿವುಚಿ ಅದರ ನೀರನ್ನು ಮಿಕ್ಸ್ ಮಾಡಬೇಕು. ಇದಾದ ಬಳಿಕ ಪಾತ್ರೆಯಲ್ಲಿ ಎಣ್ಣೆಯಿಟ್ಟು ಒಗ್ಗರಣೆ ಹಾಕಿ ಅದಕ್ಕೆ ಬೇಯಿಸಿಟ್ಟ ತರಕಾರಿಗಳನ್ನು ಹಾಕಿ ಅದಕ್ಕೆ ರುಬ್ಬಿದ ಮಸಾಲೆಯನ್ನು ಬೆರೆಸಿ ಕುದಿಸಿ ಇಳಿಸಿ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಬೇಕು. ಈಗ ಮಿಕ್ಸ್ ತರಕಾರಿ ಹುಳಿ ರೆಡಿ.