ಮನೆಯಲ್ಲೇ ಮಾಡಿ ಪಾಲಕ್ ಪನ್ನೀರ್

ಮನೆಯಲ್ಲೇ ಮಾಡಿ ಪಾಲಕ್ ಪನ್ನೀರ್

LK   ¦    May 07, 2018 12:47:19 PM (IST)
ಮನೆಯಲ್ಲೇ ಮಾಡಿ ಪಾಲಕ್ ಪನ್ನೀರ್

ಬಹಳಷ್ಟು ಮಂದಿ ಪಾಲಕ್ ಪನ್ನೀರ್ ಎಂದರೆ ತುಂಬಾ ಇಷ್ಟಪಡುತ್ತಾರೆ. ಈ ಪದಾರ್ಥವನ್ನು ಮನೆಯಲ್ಲಿಯೇ ತುಂಬಾ ರುಚಿಯಾಗಿ ಸಿದ್ಧಪಡಿಸಬಹುದು. ಪಾಲಕ್ ಪನ್ನೀರನ್ನು ಹೇಗೆ ಮಾಡಬಹುದು ಎಂಬುದು ಇಲ್ಲಿದೆ.

ಪಾಲಕ್ ಪನ್ನಿರ್ ಮಾಡಲು ಬೇಕಾಗುವ ಸಾಮಾಗ್ರಿಗಳು

ಪಾಲಕ್ ಸೊಪ್ಪು- 4ಕಟ್ಟು

ಈರುಳ್ಳಿ-2

ಟೋಮೆಟೋ-2

ಶುಂಠಿ ಬೆಳ್ಳುಳ್ಳಿ ಪೇಸ್ಟ್- ಅರ್ಧ ಚಮಚ

ಜೀರಿಗೆ- ಕಾಲು ಚಮಚ

ಹಸಿಮೆಣಸು-4

ಪನ್ನೀರ್ ತುಂಡುಗಳು- 1 ಕಪ್

ಅರಶಿನಪುಡಿ- ಚಿಟಿಕೆ

ಗರಂ ಮಸಾಲೆ-2 ಚಮಚ

ಹಾಲಿನ ಕೆನೆ-ಕಾಲು ಕಪ್

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- 8 ಚಮಚ

ಮಾಡುವ ವಿಧಾನ ಹೀಗಿದೆ

ಮೊದಲಿಗೆ ಪಾಲಕ್ ಸೊಪ್ಪನ್ನು ಚೆನ್ನಾಗಿ ಬೇಯಿಸಿ ಮಿಕ್ಸಿಗೆ ಹಾಕಿ ರುಬ್ಬಿ ಪೇಸ್ಟ್ ಮಾಡಿಟ್ಟುಕೊಳ್ಳಬೇಕು. ಇನ್ನೊಂದೆಡೆ ಪನ್ನೀರನ್ನು ಕರಿದಿಟ್ಟು ಕೊಳ್ಳಿ. ಮತ್ತೊಂದೆಡೆ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾಗುತ್ತಿದ್ದಂತೆಯೇ ಅದಕ್ಕೆ ಜೀರಿಗೆ ಅರಶಿನ ಹಾಕಿ ನಂತರ ಹೆಚ್ಚಿದ ಈರುಳ್ಳಿ ಸೇರಿಸಿ ಹುರಿಯಬೇಕು. ಆ ನಂತರ ಟೊಮೆಟೋ, ಬೆಳ್ಳುಳ್ಳಿ ಶುಂಠಿ ಪೇಸ್ಟ್ ಹಾಕಿ ಸ್ವಲ್ಪ ಹುರಿಯಿರಿ. ಬಳಿಕ ಅದಕ್ಕೆ ರುಬ್ಬಿಟ್ಟುಕೊಂಡ ಪಾಲಕ್ ನ್ನು ಸೇರಿಸಿ ಗರಂಮಸಾಲೆ, ಉಪ್ಪು( ರುಚಿಗೆ ತಕ್ಕಂತೆ) ಹಾಕಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಹಾಲುಕೆನೆ ಸೇರಿಸಿ ಇದಾದ ಬಳಿಕ ಕರಿದಿಟ್ಟುಕೊಂಡ ಪನ್ನೀರ್ ಸೇರಿಸಿ. ಚೆನ್ನಾಗಿ ಕುದಿದ ಬಳಿಕ ಇಳಿಸಿದರೆ ಪನ್ನೀರ್ ರೆಡಿ.