ಸವಿದು ಬಿಡಿ ಪನ್ನೀರ್ ಟಿಕ್ಕಾ ಮಸಾಲ

ಸವಿದು ಬಿಡಿ ಪನ್ನೀರ್ ಟಿಕ್ಕಾ ಮಸಾಲ

LK   ¦    Oct 05, 2018 02:52:35 PM (IST)
ಸವಿದು ಬಿಡಿ ಪನ್ನೀರ್ ಟಿಕ್ಕಾ ಮಸಾಲ

ಪನ್ನೀರ್ ಟಿಕ್ಕಾ ಮಸಾಲೆಯನ್ನು ಸವಿಯದಿದ್ದಲ್ಲಿ ಮನೆಯಲ್ಲೇ ತಯಾರಿಸಿ ಸವಿಯಲು ಸಾಧ್ಯವಿದೆ. ಇಷ್ಟಕ್ಕೂ ಪನ್ನಿರ್ ಟಿಕ್ಕಾ ಮಸಾಲ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ ಹಾಗಿದ್ದರೆ ಇಲ್ಲಿದೆ ಅದನ್ನು ಮಾಡುವ ವಿಧಾನ.

ಪನ್ನೀರ್ ಟಿಕ್ಕಾ ಮಸಾಲೆ ಮಾಡಲು ಬೇಕಾಗುವ ಪದಾರ್ಥಗಳು

ಪನ್ನೀರ್- ಒಂದು ಬಾಕ್ಸ್

ಕ್ಯಾಪ್ಸಿಕಮ್- 2

ಮೊಸರು- 1ಕಪ್

ಶುಂಠಿ ಮತ್ತು ಬೆಳ್ಳುಳ್ಳಿ-ಪೇಸ್ಟ್- 1ಚಮಚ

ಅರಶಿನಪುಡಿ- ಅರ್ಧ ಚಮಚ

ಕಾರದಪುಡಿ-ಅರ್ಧಚಮಚ

ಕಡ್ಲೆಹಿಟ್ಟು-2ಚಮಚ

ಜೀರಿಗೆಪುಡಿ- ಅರ್ಧ ಚಮಚ

ಗರಮ್ ಮಸಾಲ-ಅರ್ಧ ಚಮಚ

ಕೊತ್ತಂಬರಿ ಸೊಪ್ಪು- ಅರ್ಧಕಟ್ಟು

ಚಾಟ್ ಮಸಾಲ-ಅರ್ಧ ಚಮಚ

ಉಪ್ಪು- ರುಚಿಗೆ ತಕ್ಕಷ್ಟು

ಈರುಳ್ಳಿ- 1

ನಿಂಬೆಹಣ್ಣು–ಅರ್ಧ

ಮಾಡುವ ವಿಧಾನ ಹೀಗಿದೆ.

ಮೊದಲಿಗೆ ಈರುಳ್ಳಿ, ಕ್ಯಾಪಿಕಮ್ ಮತ್ತು ಪನ್ನೀರನ್ನು ಚೌಕಾಕಾರದಲ್ಲಿ ಕತ್ತರಿಸಿಕೊಳ್ಳಬೇಕು. ಆ ನಂತರ ಒಂದು ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಮೊಸರು ಹಾಕಿ ಅದಕ್ಕೆ ಅರಶಿಣ, ಜೀರಿಗೆ ಮೆಣಸಿನಪಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆಪುಡಿ, ಚಾಟ್ ಮಸಾಲ, ಗರಂ ಮಸಾಲ, ಕಡ್ಲೆ ಹಿಟ್ಟು, ಕೊತ್ತಂಬರಿ ಸೊಪ್ಪು ಹೀಗೆ ಎಲ್ಲ ಮಸಾಲೆ ಪದಾರ್ಥಗಳನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹುಳಿಯನ್ನು ಹಾಕಿ ಚೆನ್ನಾಗಿ ಕಲಸಿ ಮಿಶ್ರಮಾಡಿಕೊಳ್ಳಬೇಕು. ಆ ನಂತರ ಈರುಳ್ಳಿ, ಪನ್ನೀರ್, ಕ್ಯಾಪ್ಸಿಕಮ್ ಹಾಕಿ ಮಸಾಲೆಯಲ್ಲಿ ಲೇಪನ ಮಾಡಿಕೊಳ್ಳಬೇಕು. ಬಳಿಕ ಅರ್ಧ ಗಂಟೆಗಳ ಕಾಲ ಹಾಗೆಯೇ ಬಿಡಬೇಕು. ಹೀಗೆ ಮಾಡುವುದರಿಂದ ಮಸಾಲೆ ಹಿಡಿಯಲು ಅನುಕೂಲವಾಗುತ್ತದೆ.

ಆ ನಂತರ ಬಾಡುಕೋಲುಗಳನ್ನು ತೆಗೆದುಕೊಂಡು ಅದಕ್ಕೆ ಕ್ಯಾಪ್ಸಿಕಮ್, ಪನ್ನೀರ್ ಹಾಗೂ ಈರುಳ್ಳಿಯನ್ನು ಚುಚ್ಚಿ ಸುರಿಯಬೇಕು. ಬಳಿಕ ಬಾಣಲೆಗೆ ಎಣ್ಣೆ ಸವರಿ ಅದರಲ್ಲಿಟ್ಟು ನಿಧಾನ ಉರಿಯಲ್ಲಿ ಮಗುಚಿಡುತ್ತಾ ಚೆನ್ನಾಗಿ ಬೇಯಿಸಬೇಕು. ಅದು ಬೇಯುತ್ತಾ ಹೊಂಬಣ್ಣಕ್ಕೆ ತಿರುಗಿದಾಗ ಬಾಣಲೆಯಿಂದ ತೆಗೆಯಬೇಕು. ಬಿಸಿಯಾಗಿದ್ದಾಗಲೇ ಸೇವಿಸಿದರು ರುಚಿಯಾಗಿರುತ್ತದೆ.